ಪಾವಾಪುರಿ
ಬಿಹಾರ ಪ್ರಾಂತ್ಯದ ಪಟ್ನ ಜಿಲ್ಲೆಯಲ್ಲಿರುವ ಒಂದು ಜೈನ ಕ್ಷೇತ್ರ. ಕ್ರಿ.ಪೂ. 527 ರಲ್ಲಿ ಕೊನೆಯ ತೀರ್ಥಂಕರನಾದ ಮಹಾವೀರ ಈ ಕ್ಷೇತ್ರದಲ್ಲಿ ನಿರ್ವಾಣ ಹೊಂದಿದನೆನ್ನಲಾಗಿದೆ. ಇಲ್ಲಿ ಸರೋವರದ ನಡುವೆ ನಿರ್ಮಿಸಿದ ಜಲಮಂದಿರವೆಂಬ ಜಿನಾಲಯದಲ್ಲಿ ಮಹಾವೀರನ ಚರಣಗಳನ್ನು ಕಡೆಯಲಾಗಿದೆ.						     (ಬಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ